ನಿಂಗೆ ಈ ಪದ ಗೊತ್ತಾ?

 ಚಟುವಟಿಕೆನಿಂಗೆ ಈ ಪದ ಗೊತ್ತಾ? 

 ಯಾರಿಗೆ

  1.  ಪದಗಳ ಪರಿಚಯ ಇರಬೇಕು  
  2.  ಈಗಷ್ಟೇ ಕನ್ನಡ ಕಲಿಯುತ್ತಿರುವ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರೂ ಆಡಬಹುದಾದ ಆಟ 
  ಕಲಿಕೆಯ ಆಯಾಮ: ಪದ ಪ್ರಯೋಗ, ಪದ ಸಂಪತ್ತು ಬೆಳಸುವಿಕೆ 

  ಬಗೆ:  ಪ್ರತಿಯೊಬ್ಬರೂ ಆಡಬಹುದು. ತಂಡಗಳು ಮಾಡಿ ಸಹ ಆಡಬಹುದು   

  ವಿವರ: 

ಮಕ್ಕಳು ಒಬ್ಬರಿಗೊಬ್ಬರು ಅಥವಾ ತಂಡಗಳು ಒಬ್ಬರಿಗೊಬ್ಬರು ಮಾಡುವ ಪದ ಚಾಲೆಂಜ್. 

ಆಟಗಾರ ಪ್ರತಿಸ್ಪರ್ಧಿ ಗೆ "ನಿಂಗೆ ಈ ಪದ ಗೊತ್ತಾ?" ಅಂತ ಚಾಲೆಂಜ್ ಮಾಡುವ. ಪ್ರತಿಸ್ಪರ್ಧಿ ಪದ ಗೊತ್ತಿದ್ದಲ್ಲಿ, ಪದದ ಅರ್ಥ (ಕನ್ನಡ ಅಥವಾ ಇಂಗ್ಲಿಷ್), ಇಲ್ಲವೇ ಪದವನ್ನು ವಾಕ್ಯದಲ್ಲಿ ಉಪಯೋಗಿಸಿ ಹೇಳಬೇಕು. ಸಮರ್ಪಕವಾದ ಉತ್ತರ ನೀಡಿದಲ್ಲಿ ಪ್ರತಿಸ್ಪರ್ಧಿಗೆ ಅಂಕ, ಇಲ್ಲವಾದಲ್ಲಿ, ಪ್ರಶ್ನೆ ನೀಡಿದವರಿಗೆ ಅಂಕ 

ಉದಾಹರಣೆ:

ತಂಡ ೧: ಜಗುಲಿ

ತಂಡ ೨: ಮನೆಯ ಮುಂದೆ ಜಗುಲಿ ಇದೆ ✅

ತಂಡ ೨: ಚಂದನ 

ತಂಡ ೧: ಚಂದನ ಚಾನೆಲ್ ನಲ್ಲಿ, ಕನ್ನಡ ಕಾರ್ಯಕ್ರಮಗಳನ್ನು ನೋಡಬಹುದು 

(❌ಇದು ಸಮರ್ಪಕವಾದ ಉತ್ತರ ಅಲ್ಲ)










Comments