ಜೋಡಿ + ಪದ = ಜೋಡಿಪದ

  ಚಟುವಟಿಕೆ: ಜೋಡಿ + ಪದ = ಜೋಡಿಪದ 

 ಯಾರಿಗೆ

  1.  ಪದಗಳ ಪರಿಚಯ ಇರಬೇಕು  
  2.  ಕನ್ನಡ ಕಲಿಯುತ್ತಿರುವ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರೂ ಆಡಬಹುದಾದ ಆಟ 
  ಕಲಿಕೆಯ ಆಯಾಮ: ಪದ ಪ್ರಯೋಗ, ಪದಜ್ಞಾನ ಬೆಳಸುವಿಕೆ 

  ಬಗೆ:  ಪ್ರತಿಯೊಬ್ಬರೂ ಆಡಬಹುದು. ತಂಡಗಳು ಮಾಡಿ ಸಹ ಆಡಬಹುದು   

  ವಿವರ: 

  ತಂಡ ೧ ಪದವೊಂದನ್ನು  ತಂಡ ೨ ಕ್ಕೆ  ನೀಡುವುದು. ತಂಡ ೨, ಕೊಟ್ಟ ಪದಕ್ಕೆ ಸೂಕ್ತವಾದ ಇನ್ನೊಂದು ಪದವನ್ನು ಸೇರಿಸಿ ಜೋಡಿಪದ ಮಾಡಬೇಕು. ಮಾಡಿದಲ್ಲಿ ತಂಡ ೨ ಕ್ಕೆ  ಅಂಕ ದೊರೆಯುತ್ತದೆ. ಇಲ್ಲವಾದಲ್ಲಿ, ತಂಡ ೧, ಕೊಟ್ಟ ಪದದ ಜೊತೆಗೆ ಜೋಡಿಪದ ಮಾಡಿ ತೋರಿಸಿ ಅಂಕ ಗಳಿಸಬಹುದು 

  ಜೋಡಿಪದಗಳಲ್ಲಿ ಬರುವ ಪ್ರತಿ ಪದವು ಸ್ವತಂತ್ರ ಹಾಗೂ ಅರ್ಥಪೂರ್ಣವಾಗಿರಬೇಕು. 

  ಹಾಗೆಯೇ, ಪದಗಳು ಸೇರುವಾಗ ಸಂಧಿಯಾಗಬಾರದು.

  ಉದಾಹರಣೆ :

  ತಂಡ ೧ - ನಾಯಿ            ತಂಡ ೨ - ಮರಿ    =  ನಾಯಿಮರಿ   - ತಂಡ ೨ ಕ್ಕೆ ಅಂಕ 

  ತಂಡ ೧ -  ಅರ್ಥ         ತಂಡ ೨ - ಪೂರ್ಣ  =  ಅರ್ಥಪೂರ್ಣ  - ತಂಡ ೨ ಕ್ಕೆ ಅಂಕ 

ಸಮರ್ಪಕವಲ್ಲದ್ದು 

❌ ಚಿತ್ರ + ಅನ್ನ = ಚಿತ್ರಾನ್ನ  (ಸಂಧಿ)

❌ ಆಟ + ಗಾರ = ಆಟಗಾರ. ಇಲ್ಲಿ 'ಗಾರ' ಅರ್ಥಪೂರ್ಣ ಪದವಲ್ಲ. ಬದಲಿಗೆ ಪ್ರತ್ಯಯ ಮಾತ್ರವೇ 

❌ ಬುದ್ದಿ + ವಂತ = ಬುದ್ದಿವಂತ. ಇಲ್ಲಿ 'ವಂತ' ಅರ್ಥಪೂರ್ಣ ಪದವಲ್ಲ. ಬದಲಿಗೆ ಪ್ರತ್ಯಯ ಮಾತ್ರವೇ

❌ ನೀರು + ಕುಡಿ = ನೀರುಕುಡಿ. ಇಲ್ಲಿ "ನೀರು ಕುಡಿ" ಜೋಡಿ ಪದವಾಗಲು ಸಾಧ್ಯವಿಲ್ಲ. ಎರಡನ್ನೂ ಸೇರಿಸಲಾಗುವುದಿಲ್ಲ, ಸ್ವತಂತ್ರವಾಗಿಯೇ ಇರಬೇಕು. 

❌ ಸರ + ಸ್ವತಿ = ಸರಸ್ವತಿ, ಸರ + ಕಾರ = ಸರಕಾರ

❌ ದೋಸೆ ಗೀಸೆ , ಹಾಳು ಮೂಳು, ಚೆಲ್ಲಾಪಿಲ್ಲಿ  - ಆಡು ಮಾತು

ಜೋಡಿ ಪದದ ಉದಾಹರಣೆಗಳು 

ಚಂದ್ರಕಾಂತಿ 

ಸೂರ್ಯರಶ್ಮಿ

ಕಾಲಮಾನ

ಆತ್ಮಜ್ಞಾನ

ಆಟಪಾಠ

ಪ್ರತಿಬಿಂಬ

ಪಠ್ಯಪುಸ್ತಕ 

ಅಡುಗೆಮನೆ

ಮಾತುಕತೆ

ದಿನನಿತ್ಯ 

ಹರಿದಾಸ

ಆದಿಶೇಷ

ದಿನಪತ್ರಿಕೆ

ಚೂರುಪಾರು

ಆಡುಮಾತು, ಆಡುಭಾಷೆ





  

 

Comments