ಪದಗಳಿಂದ ವಾಕ್ಯ ವಿಸ್ತರಣೆ

 ಚಟುವಟಿಕೆ: ಪದಗಳಿಂದ ವಾಕ್ಯ ವಿಸ್ತರಣೆ 

 ಯಾರಿಗೆ

  1. ಸ್ವಲ್ಪ ಮಟ್ಟಿಗೆ ಪದಗಳ ಪರಿಚಯ ಇರುವ ಮಕ್ಕಳಿಗೆ 
  2. "ವಾಕ್ಯ"ದ ಪರಿಚಯ ತಿಳಿದಿರಬೇಕು  
  ಕಲಿಕೆಯ ಆಯಾಮ: ಪದ ಪ್ರಯೋಗ, ಮಾತು, ಸಂಭಾಷಣೆ ಹಾಗೂ ವಾಕ್ಯ ರಚನೆ

  ಬಗೆ:  ಪ್ರತಿಯೊಬ್ಬರೂ ಆಡಬಹುದು. ತಂಡಗಳು ಬೇಕಿಲ್ಲ  

  ವಿವರ: 

  ಉಪಾಧ್ಯಾಯರು ಒಂದು ಚಿಕ್ಕ ವಾಕ್ಯ ಮಕ್ಕಳಿಗೆ ಕೊಡಬೇಕು. ಪ್ರತಿ ಮಗುವು ಸರತಿಯಂತೆ ಅದಕ್ಕೆ ಪದ(ಗಳು) ಸೇರಿಸಿ ಅರ್ಥಪೂರ್ಣ ವಾಕ್ಯವಾಗಿಸುತ್ತಾ ಆ ವಾಕ್ಯವನ್ನು ವಿಸ್ತರಿಸಬೇಕು. ನೆನಪಿಡಿ, ಒಂದೇ ವಾಕ್ಯ! 

   ಸೇರಿಸುವ ಪದಗಳು, ವಾಕ್ಯದ ಯಾವುದೇ ಭಾಗದಲ್ಲಾದರೂ ಬರಬಹುದು - ಮುಂದೆ, ಹಿಂದೆ, ಮಧ್ಯೆ.  

   ಮೊದಲು ಇಂಗ್ಲಿಷ್ನಲ್ಲಿ ಇದನ್ನು ಆಡಿಸಿ. ಮಕ್ಕಳಿಗೆ ಅಥ ಆಗುತ್ತದೆ ಮತ್ತು ಸುಲಭ ಎಂದು ಅನಿಸುತ್ತದೆ. ನಂತರ, ಕನ್ನಡದಲ್ಲಿ ಆಡಿಸಿ 

    Example:

    A sentence from Teacher:  I ate

    Student 1:  I ate ice cream

    Student 2:  I ate ice cream in the evening

    Student 3:  I ate ice cream with friends in the evening

    ಉದಾಹರಣೆ 

    ಮೊದಲ ವಾಕ್ಯ: ನಾನು ಎದ್ದೆ

    ವಿದ್ಯಾರ್ಥಿ ೧:  ನಾನು ಬೆಳಗ್ಗೆ ಎದ್ದೆ    

    ವಿದ್ಯಾರ್ಥಿ ೨:  ನಾನು ಬೆಳಗ್ಗೆ ಎದ್ದು ತಿಂಡಿ ತಿಂದೆ

    ವಿದ್ಯಾರ್ಥಿ ೩:  ನಾನು ಬೆಳಗ್ಗೆ ಎದ್ದು, ಸ್ನಾನ ಮಾಡಿ, ತಿಂಡಿ ತಿಂದೆ

    ವಿದ್ಯಾರ್ಥಿ ೪:  ನಾನು ಬೆಳಗ್ಗೆ ಎದ್ದು, ಸ್ನಾನ ಮಾಡಿ, ತಿಂಡಿ ತಿಂದೆ ಮತ್ತು ಶಾಲೆಗೆ ಹೋದೆ 

   ಸಾಮಾನ್ಯವಾಗಿ, ಮಕ್ಕಳು "ಆಮೇಲೆ" ಎಂದು ಉಪಯೋಗಿಸಿ ವಾಕ್ಯ ವಿಸ್ತಾರ ಮಾಡಲು ನೋಡುತ್ತಾರೆ. ಆದರೆ, ಅದು ಬೇರೆ ವಾಕ್ಯ ಆಗುತ್ತದೆ ಎಂದು ಅವರಿಗೆ ಅರಿವು ಮೂಡಿಸಬೇಕು 

  ವಾಕ್ಯ ವಿಸ್ತಾರ ಮಾಡಲು conjunctions - comma (,), ಮತ್ತು, ಅಥವಾ, ಆದರೆ  - ಪದಗಳನ್ನು ಬಳಸುವ ಬಗ್ಗೆ ವಿವರಿಸಿ                

Comments