ಪದಗಳ ಹಾರ ಅಥವಾ ಸರಪಳಿ

  ಚಟುವಟಿಕೆಪದಗಳ ಹಾರ ಅಥವಾ ಸರಪಳಿ 

 ಯಾರಿಗೆ

  1.  ಕೆಲವೇ ಕೆಲವಾದರೂ ಪದಗಳ ಪರಿಚಯ ಇರಬೇಕು  
  2.  ಈಗಷ್ಟೇ ಕನ್ನಡ ಕಲಿಯುತ್ತಿರುವ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರೂ ಆಡಬಹುದಾದ ಆಟ 
  ಕಲಿಕೆಯ ಆಯಾಮ: ಪದ ಪ್ರಯೋಗ, ಗಮನ, ನೆನಪಿನ ಶಕ್ತಿಯ ಪರೀಕ್ಷೆ 

  ಬಗೆ:  ಪ್ರತಿಯೊಬ್ಬರೂ ಆಡಬಹುದು. ತಂಡಗಳು ಬೇಕಿಲ್ಲ  

  ವಿವರ: 

  ಉಪಾಧ್ಯಾಯರು ಸೂಚಿಸುವ ಅಕ್ಷರದಿಂದ ಪ್ರಾರಂಭವಾಗುವ ಕನ್ನಡ ಪದಗಳನ್ನು ಸರತಿಯಂತೆ ಹೇಳಬೇಕು. ಮಗುವಿನ ಸರತಿ ಬಂದಾಗ, ಈವರೆಗೂ ಹೇಳಿರುವ ಎಲ್ಲ ಪದಗಳನ್ನು ಅದೇ ಕ್ರಮದಲ್ಲಿ ಮೊದಲು ಹೇಳಿ ನಂತರ ತಮ್ಮ ಆಯ್ಕೆಯ ಪದವನ್ನು ಸೇರಿಸಬೇಕು 

  ಹೀಗೆಯೇ ಪದಗಳ ಸರಪಳಿಯನ್ನು ಹಲವಾರು ಸುತ್ತುಗಳ ತನಕ ಮುಂದುವರೆಸಬಹುದು

  ಮಗುವು ಪದವನ್ನು ಹೇಳಿದಾಗ ಅದರ ಅರ್ಥ ತಿಳಿದಿದಿಯೇ ಎಂದು ವಿಚಾರಿಸಿ, ಇಲ್ಲವೆಂದರೆ, ವಿವರಿಸಿ, ನಂತರ ಆಟ  ಮುಂದುವರೆಸಬಹುದು 

  ಉದಾಹರಣೆ: ಕೊಟ್ಟ ಅಕ್ಷರ - ಕ  

  ಮಗು ೧: ಕಲ್ಲು 

  ಮಗು ೨: ಕಲ್ಲು, ಕೈ

  ಮಗು ೩: ಕಲ್ಲು, ಕೈ, ಕೋತಿ 

  ಮಗು ೪: ಕಲ್ಲು, ಕೈ, ಕೋತಿ, ಕಪ್ಪು 

  ......

  ಕಾಫಿ, ಕಾರು - ತರಹದ ಇಂಗ್ಲಿಷ್ ಪದಗಳನ್ನು ತಪ್ಪಿಸಲು ಸಾಧ್ಯವಾದರೆ ಒಳ್ಳೆಯದು. ಕನ್ನಡ ಪದಗಳನ್ನು ಉಪಯೋಗಿಸಲು ಪ್ರೋತ್ಸಾಹ ನೀಡಿ  

Comments