ಕೊಟ್ಟ ಅಕ್ಷರಗಳನ್ನಷ್ಟೇ ಉಪಯೋಗಿಸಿ ಪದಗಳನ್ನು ಕಂಡು ಹಿಡಿಯಿರಿ

 ಚಟುವಟಿಕೆಕೊಟ್ಟ ಅಕ್ಷರಗಳನ್ನಷ್ಟೇ ಉಪಯೋಗಿಸಿ ಪದಗಳನ್ನು ಕಂಡು ಹಿಡಿಯಿರಿ

 ಯಾರಿಗೆ

  1.  ಪದಗಳ ಪರಿಚಯ ಇರಬೇಕು  
  2.  ಈಗಷ್ಟೇ ಕನ್ನಡ ಕಲಿಯುತ್ತಿರುವ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರೂ ಆಡಬಹುದಾದ ಆಟ 
  ಕಲಿಕೆಯ ಆಯಾಮ: ಪದ ಪ್ರಯೋಗ, ಗಮನ, ನೆನಪಿನ ಶಕ್ತಿಯ ಪರೀಕ್ಷೆ 

  ಬಗೆ:  ಪ್ರತಿಯೊಬ್ಬರೂ ಆಡಬಹುದು. ತಂಡಗಳು ಮಾಡಿ ಸಹ ಆಡಬಹುದು   

  ವಿವರ: 

    ಅಕ್ಷರಮಾಲೆಯ ಪ್ರತಿ ಅಕ್ಷರವನ್ನು ಒಂದು ಚೀಟಿಯಲ್ಲಿ ಬರೆದು ಒಂದು ಬಟ್ಟಲಲ್ಲಿ ಹಾಕಿಡಿ. ಚೆನ್ನಾಗಿ ಕುಲುಕಿಸಿದ ನಂತರ, ಯಾವುದಾದರು ಚೀಟಿ ತೆಗೆದು ಅದರಲ್ಲಿರುವ ಅಕ್ಷರವನ್ನು ಪದ ರಚಿಸಲು ನೀಡಿ. 

    ಪ್ರತಿ ಅಕ್ಷರ ತೆಗೆದಾಗಲೂ ೩೦ ಸೆಕೆಂಡುಗಳ ಹೆಚ್ಚುವರಿ ಕಾಲಾವಕಾಶ ನೀಡಿ. ಅಂದರೆ ಮೊದಲಿನ ಅಕ್ಷರಕ್ಕೆ ೩೦ ಸೆಕೆಂಡುಗಳು, ಎರಡನೇ ಅಕ್ಷರ ತೆಗೆದಾಗ ಒಂದು ನಿಮಿಷ,.. (ಇದಕ್ಕೆ ಬದಲಾಗಿ ನಿಮ್ಮದೇ ಸಮಯದ ನಿಯಮವನ್ನು ಕೂಡ ಮಾಡಿಕೊಳ್ಳಬಹುದು) 

    ಪ್ರತಿ ಆಟಗಾರ ಅಥವಾ ತಂಡವು ಎಷ್ಟು ಸಾಧ್ಯವೋ ಅಷ್ಟು ಪದಗಳನ್ನು, ಈವರೆಗೆ ಹೊರ ಬಂದ ಅಕ್ಷರಗಳನ್ನು ಮಾತ್ರ ಬಳಸಿ, ಕೊಟ್ಟ ಕಾಲಾವಕಾಶದೊಳಗೆ ಬರೆದು ನೀಡಬೇಕು. 

    ಯಾರು ಹೆಚ್ಚಿನ ಪದಗಳನ್ನು ಮಾಡಿರುತ್ತಾರೋ ಅವರಿಗೆ ಆಷ್ಟು ಅಂಕಗಳು ದೊರೆಯುತ್ತವೆ. 

    ಹೀಗೆಯೇ ಸುತ್ತುಗಳು ಮುಂದುವರೆಯುತ್ತದೆ. ಪಾರ್ಟಿ ಸುತ್ತಿನಲ್ಲೂ ಹೊಸ ಪದಗಳನ್ನು ಮಾಡಬೇಕು. ಕೊನೆಗೆ, ಯಾರಿಗೆ ಒಟ್ಟಾರೆ ಹೆಚ್ಚಿನ ಅಂಕಗಳು ದೊರೆತಿರುವುದೋ ಅವರೇ ವಿಜಯಿ.

ಉದಾಹರಣೆ:  

        ಸುತ್ತು ೧  - ಜ 

       ತಂಡ ೧ :  --

       ತಂಡ ೨ :   ಜೈ 

        ಸುತ್ತು ೨  - ಜ, ಗ  

       ತಂಡ ೧ :  ಗಜ, ಗೊಜ್ಜು, ಗಾಜು 

       ತಂಡ ೨ :   ಗಜ, ಜಾಗ 

      ಸುತ್ತು ೧  - ಜ, ಗ, ಅ  

       ತಂಡ ೧ :  ಅಜ 

       ತಂಡ ೨ :  ಅಜ 

        .....

Comments

Popular Posts