ಪ್ರಾಸ.. ಇಲ್ಲಾ ತ್ರಾಸ! Rhyme Time

 ಚಟುವಟಿಕೆ: ಪ್ರಾಸ.. ಇಲ್ಲಾ ತ್ರಾಸ! Rhyme Time

 ಯಾರಿಗೆ

  1.  ಪದಗಳ ಪರಿಚಯ ಇರಬೇಕು  
  2.  ಈಗಷ್ಟೇ ಕನ್ನಡ ಕಲಿಯುತ್ತಿರುವ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರೂ ಆಡಬಹುದಾದ ಆಟ 
  ಕಲಿಕೆಯ ಆಯಾಮ: ಪದ ಪ್ರಯೋಗ, ಪದ ಸಂಪತ್ತು ಬೆಳಸುವಿಕೆ 

  ಬಗೆ:  ಪ್ರತಿಯೊಬ್ಬರೂ ಆಡಬಹುದು. ತಂಡಗಳು ಮಾಡಿ ಸಹ ಆಡಬಹುದು   

  ವಿವರ: 

ಆಟಗಾರ ಪ್ರತಿಸ್ಪರ್ಧಿ ಗೆ ಒಂದು ಪದ ಕೊಡುತ್ತಾನೆ. ಪ್ರತಿಸ್ಪರ್ಧಿ ಆ ಪದಕ್ಕೆ ಹೊಂದುವ ಸೂಕ್ತವಾದ ಪ್ರಾಸದ ಪದವನ್ನು (Rhyming word) ಹೇಳಬೇಕು. ಪ್ರತಿಸ್ಪರ್ಧಿ ಹೇಳಿದ ಮೇಲೆ ಆಟಗಾರ ಇನ್ನೊಂದು ಸೂಕ್ತ  ಪ್ರಾಸದ ಪದ ಹೇಳಬೇಕು (Rhyming word) . ಆಗ ಸುತ್ತು ಮುಗಿಯುತ್ತದೆ. 

- ಪ್ರತಿಸ್ಪರ್ಧಿ ಸರಿಯಾದ ಪ್ರಾಸದ ಪದ ಹೇಳದೆ ಇದ್ದಾಗ, ಆಟಗಾರ ಅಂಕ ಗಳಿಸುತ್ತಾನೆ

- ಪ್ರತಿಸ್ಪರ್ಧಿ ಸಮಂಜಸ ಪದ ನೀಡಿದಾಗ, ಆಟಗಾರ ಮತ್ತೊಂದು ಪ್ರಾಸದ ಪದ ಹೇಳದೇ ಇದ್ದರೆ, ಪ್ರತಿಸ್ಪರ್ಧಿಗೆ ಅಂಕ ದೊರೆಯುತ್ತದೆ. ಆಟಗಾರ ಸಮರ್ಪಕವಾದ ಪ್ರಾಸದ ಪದ ಹೇಳಿ ಉತ್ತರಿಸಿದಲ್ಲಿ, ಆಟಗಾರನಿಗೆ ಅಂಕ ದೊರೆಯುತ್ತದೆ 

- ಪ್ರಾಸದ ಪದ ಹೇಳಲು ೩೦ ಸೆಕೆಂಡ್ ಅಥವಾ ಸೂಕ್ತ ಸಮಯ ನಿಗದಿ ಮಾಡಬಹುದು


ಉದಾಹರಣೆ

ಸುತ್ತು ೧

‌‌‍‌ತಂಡ ೧            ತಂಡ ೨

ಆಟ                ಊಟ 

ಓಟ 

(ತಂಡ ೧ ಅಂಕ ಗಳಿಸುತ್ತಾರೆ)

ಸುತ್ತು ೨

‌‌‍‌ತಂಡ ೧            ತಂಡ ೨

ಖಾಲಿ                ----

ಮಾಲಿ 

(ತಂಡ ೧ ಅಂಕ ಗಳಿಸುತ್ತಾರೆ)

ಸುತ್ತು ೩

‌‌‍‌ತಂಡ ೧            ತಂಡ ೨

ಅಜ್ಜ                 ---- ('ರಜ'  ಎಂದು ಕೊಟ್ಟ ಉತ್ತರ ಸಮರ್ಪಕವಲ್ಲ)

-----

(ತಂಡ ೨, ಉತ್ತರ ನೀಡದೇ ಇದ್ದರೂ, ತಂಡ ೧ ಮತ್ತೊಂದು ಪ್ರಾಸದ ಪದ ಹೇಳಲಿಲ್ಲ. ಆದ ಕಾರಣ, ತಂಡ ೨ ಅಂಕ ಗಳಿಸುತ್ತಾರೆ)

ಪ್ರತಿ ಪದದ ಅರ್ಥ, ಪ್ರಾಸದ ಔಚಿತ್ಯ ಮಕ್ಕಳಿಗೆ ತಿಳಿಸಿ ಕೊಡಬಹುದು.



Comments