ಜೋಡಿ + ಪದ = ಜೋಡಿಪದ
ಚಟುವಟಿಕೆ : ಜೋಡಿ + ಪದ = ಜೋಡಿಪದ ಯಾರಿಗೆ : ಪದಗಳ ಪರಿಚಯ ಇರಬೇಕು ಕನ್ನಡ ಕಲಿಯುತ್ತಿರುವ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರೂ ಆಡಬಹುದಾದ ಆಟ ಕಲಿಕೆಯ ಆಯಾಮ: ಪದ ಪ್ರಯೋಗ, ಪದಜ್ಞಾನ ಬೆಳಸುವಿಕೆ ಬಗೆ: ಪ್ರತಿಯೊಬ್ಬರೂ ಆಡಬಹುದು. ತಂಡಗಳು ಮಾಡಿ ಸಹ ಆಡಬಹುದು ವಿವರ: ತಂಡ ೧ ಪದವೊಂದನ್ನು ತಂಡ ೨ ಕ್ಕೆ ನೀಡುವುದು. ತಂಡ ೨, ಕೊಟ್ಟ ಪದಕ್ಕೆ ಸೂಕ್ತವಾದ ಇನ್ನೊಂದು ಪದವನ್ನು ಸೇರಿಸಿ ಜೋಡಿಪದ ಮಾಡಬೇಕು. ಮಾಡಿದಲ್ಲಿ ತಂಡ ೨ ಕ್ಕೆ ಅಂಕ ದೊರೆಯುತ್ತದೆ. ಇಲ್ಲವಾದಲ್ಲಿ, ತಂಡ ೧, ಕೊಟ್ಟ ಪದದ ಜೊತೆಗೆ ಜೋಡಿಪದ ಮಾಡಿ ತೋರಿಸಿ ಅಂಕ ಗಳಿಸಬಹುದು ಜೋಡಿಪದಗಳಲ್ಲಿ ಬರುವ ಪ್ರತಿ ಪದವು ಸ್ವತಂತ್ರ ಹಾಗೂ ಅರ್ಥಪೂರ್ಣವಾಗಿರಬೇಕು. ಹಾಗೆಯೇ, ಪದಗಳು ಸೇರುವಾಗ ಸಂಧಿಯಾಗಬಾರದು. ಉದಾಹರಣೆ : ತಂಡ ೧ - ನಾಯಿ ತಂಡ ೨ - ಮರಿ = ನಾಯಿಮರಿ - ತಂಡ ೨ ಕ್ಕೆ ಅಂಕ ತಂಡ ೧ - ಅರ್ಥ ತಂಡ ೨ - ಪೂರ್ಣ = ಅರ್ಥಪೂರ್ಣ - ತಂ...